ಡೆಹ್ರಾಡೂನ್
ಉತ್ತರ ಪ್ರದೇಶ ರಾಜ್ಯದ ಒಂದು ನಗರ ; ಒಂದು ಜಿಲ್ಲೆ, ನಗರ ಸಮುದ್ರಮಟ್ಟದಿಂದ 2,200' ಎತ್ತರದಲ್ಲಿದೆ.  ಉತ್ತರ ರೈಲ್ವೆಯ ಹರಿದ್ವಾರ-ಡೆಹ್ರಾ ಡೂನ್ ರೈಲು ಮಾರ್ಗದ ಕೊನೆಯ ನಿಲ್ದಾಣವಿದು.  ಹರಿದ್ವಾರದಿಂದ ಉತ್ತರ-ವಾಯುವ್ಯಕ್ಕೆ 32 ಮೈ. ದೂರದಲ್ಲಿದೆ.  ಮೈದಾನ ಪ್ರದೇಶದೊಂದಿಗೆ ಮಸೂರಿಯನ್ನು ಸೇರಿಸುವ ರಸ್ತೆ ಡೆಹ್ರಾ ಡೂನ್ ಮುಖಾಂತರ ಹಾದು ಹೋಗುತ್ತದೆ.  ನಗರದ ಜನಸಂಖ್ಯೆ 2,03,464 (1971).  ಸರ್ವೆ ಆಫ್ ಇಂಡಿಯ ಮತ್ತು ಅರಣ್ಯ ಇಲಾಖೆಯ ಮುಖ್ಯ ಕಚೇರಿಗಳು.  ಸರ್ವೆ ಆಫ್ ಇಂಡಿಯ ಮತ್ತು ಅರಣ್ಯ ಇಲಾಖೆಯ ಮುಖ್ಯ ಕಚೇರಿಗಳು, ವೃಕ್ಷ ಪೋಷಣೆಗೆ ಸಂಬಂಧಿಸಿದ ಅರಣ್ಯ ಸಂಶೋಧನ ಸಂಸ್ಥೆ ಮತ್ತು ಪುರಾತತ್ವ ರಸಾಯನವಿe್ಞÁನ ಪ್ರಯೋಗಶಾಲೆ, ಸೇನೆಯ ಮೂರೂ ಸೇವೆಗಳಿಗೆ ಸಂಬಂಧಿಸಿದಂತೆ ಭಾರತ ಸೈನಿಕ ಕಾಲೇಜು.  ರಾಷ್ಟ್ರೀಯ ಭಾರತೀಯ ಮಿಲಿಟೆರಿ ಅಕಾಡೆಮಿ ಇವು ಇಲ್ಲಿರುವ ಕೆಲವು ಮುಖ್ಯ ಸಂಸ್ಥೆಗಳು.  ಅರಣ್ಯ ಇಲಾಖೆಯ ಕಟ್ಟಡ  ಅಂದವಾದ್ದು.  ಅದರಲ್ಲಿ ಅನೇಕ ಅರಣ್ಯವಸ್ತುಗಳ ಸಂಗ್ರಹವುಂಟು.  ಆಫ್ಘಾನಿಸ್ತಾನದ ಹಿಂದಿನ ಅಮೀರನ ಕಟ್ಟಡವೂ ಸುಂದರವಾಗಿದೆ.  ಆಗ್ರ ವಿಶ್ವವಿದ್ಯಾಲಯಕ್ಕೆ ಸೇರಿದ ಎರಡು ಪದವಿಕಾಲೇಜುಗಳು.  ಭಾರತ ಅರಣ್ಯ ಕಾಲೇಜು, ಆರು ವಸ್ತುಸಂಗ್ರಹಾಲಯಗಳು (ಚಿತ್ರಶಾಲೆ) ಮತ್ತು ಅನೇಕ ಶಾಲೆಗಳು ಇವೆ.  ಡೆಹ್ರಾ ಡೂನಿನಲ್ಲಿ ವಾರ್ಷಿಕವಾಗಿ 89” ಮಳೆ ಬೀಳುತ್ತದೆ. 

	ಡೆಹ್ರಾ ಡೂನ್‍ನ ವಾಯುವ್ಯಕ್ಕಿರುವ ದಂಡುಪ್ರದೇಶದಲ್ಲಿ ಉದಾಸಿಪಂಥದ ಸಿಖ್ ಗುರು ರಾಮ್‍ರಾಯ್‍ನಿಂದ ನಿರ್ಮಿತವಾದ (1699) ಒಂದು ದೇವಾಲಯವಿದೆ. 

	ಡೆಹ್ರಾ ಡೂನ್ ಜಿಲ್ಲೆಯ ವಿಸ್ತೀರ್ಣ 3,008 ಚ.ಕಿಮೀ. ಜನಸಂಖ್ಯೆ 5,77,306 (1971).  ಶಿವಾಲಿಕ್ ಪರ್ವತ ಮತ್ತು ಹಿಮಾಲಯದ ಆರಂಭದ ಗಿರಿಗಳ ಮಧ್ಯೆ ಕೊಳ್ಳದಲ್ಲಿ ಡೆಹ್ರಾ ಡೂನ್ ಜಿಲ್ಲೆ ಸ್ಥಾಪಿತವಾಗಿದೆ.  ಪೂರ್ವಭಾಗದಲ್ಲಿ ಗಂಗಾ, ಪಶ್ಚಿಮದಲ್ಲಿ ಯಮುನಾ ನದಿಗಳು ಹರಿಯುತ್ತವೆ.  ಶಿವಾಲಿಕ್ ಗರಿಷ್ಠ ಶಿಖರದ ಎತ್ತರ 6,345 ಜಿಲ್ಲೆಯಲ್ಲಿರುವ ತಾಲ್ಲೂಕುಗಳು ಚಕ್ರಾತಾ (79,128) ಮತ್ತು ಡೆಹ್ರಾ ಡೂನ್ (4,98,178), ಕ್ಲೆಮೆಂಟ್ ಟೌನ್ (11,898) , ಹೃಷಿಕೇಶ (17,646) ಮತ್ತು ಮಸೂರಿ (18,038).  ಇವು ಜಿಲ್ಲೆಯ ಪ್ರಮುಖ ಪಟ್ಟಣಗಳು.  ಅಕ್ಕಿ, ಗೋದಿ ಮತ್ತು ದ್ವಿದಳ ಧಾನ್ಯಗಳು ಇಲ್ಲಿಯ ಮುಖ್ಯ ಕೃಷಿ ಉತ್ಪನ್ನಗಳು.  ಪರ್ವತಗಳ ಕೆಳಗಿನ ತೆವರಿಯಲ್ಲಿ ಚಹ, ಬಾರ್ಲಿ, ಮೆಕ್ಕೆ ಜೋಳ, ಎಣ್ಣೆಕಾಳುಗಳು, ಮಾವು, ಮತ್ತು ಸಾಗುವಾನಿ ಬೆಳೆಯುತ್ತಾರೆ.  ಶಿವಾಲಿಕ್ ಬೆಟ್ಟಗಳಲ್ಲಿ ಆನೆಗಳು ಸಿಕ್ಕುತ್ತವೆ.  ಅರಣ್ಯದಲ್ಲಿ ಹುಲಿ, ಚಿರತೆ, ಕರಡಿ, ಮಂಗ, ಚಿಗರೆಗಳು ಹೇರಳವಾಗಿವೆ.  ಕೊಳ್ಳಪ್ರದೇಶದಲ್ಲಿ ವಾಯುಗುಣ ತಂಪಾಗಿದೆ. 

	1815ರ ಗೂರ್ಖ ಯುದ್ಧದ ಅನಂತರ ಪೂರ್ವದ ಕೆಲವು ಪ್ರದೇಶಗಳೊಂದಿಗೆ ಈ ಜಿಲ್ಲೆಯೂ ಸೇರಿದ್ದು ಇದು ಹಿಂದಿನ ಸಂಯುಕ್ತ ಪ್ರಾಂತ್ಯಗಳ ಒಂದು ಜಿಲ್ಲೆಯಾಗಿತ್ತು ; ಈಗ ಉತ್ತರ ಪ್ರದೇಶದಲ್ಲಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ